ಆಕಾಶ ಏಕೆ ನೀಲವಾಗಿದೆ? ಅದು ಯಾವತ್ತೂ ನೀಲ ಆಗಿರಲ್ಲ, ಅಲ್ಲವೇ? ಗಿಡದ ಎಲೆಗಳು ಏಕೆ ಹಸಿರಾಗಿವೆ? ಅವು ಯಾವತ್ತೂ ಹಸಿರಾಗಿರಲ್ಲ; ಅಲ್ಲವೇ? ಬಾಳೆಹಣ್ಣು ಏಕೆ ಹಳದಿಯಾಗಿದೆ? ಹಣ್ಣಾದ ಬಾಳೆ ಹಳದಿ. ಮಾಗದ ಬಾಳೆ ಹಸಿರು. ಛತ್ತಿಗಳು ಏಕೆ ಕಪ್ಪು? ಎಲ್ಲಾ ಛತ್ತಿಗಳೂ ಕಪ್ಪು ಬಣ್ಣದವಲ್ಲ. ರಕ್ತ ಏಕೆ ಕೆಂಪಾಗಿದೆ? ರಕ್ತದಲ್ಲಿ ಕಬ್ಬಿಣದ ಅಂಶ ಇದೆ. ಅದರಿಂದಲೇ ಕೆಂಪು ಬಣ್ಣ. ಉಪ್ಪು ಏಕೆ ಬಿಳಿಯಾಗಿದೆ? ನಂಗೊತ್ತಿಲ್ಲಮ್ಮಾ. Click to Read an Interactive version of this story here
Month: January 2015
Annual Haircut day-Kannada
ಇಂದು ಶೃಂಗೇರಿ ಶ್ರೀನಿವಾಸನಿಗೆ ವಾರ್ಷಿಕ ಕ್ಷೌರ ದಿನಾಚರಣಿ. ಎಂದಿನಂತೆ ಮನೆಯಿಂದ ಹೊರಟ ಶೃಂಗೇರಿ ಶ್ರೀನಿವಾಸ ಊರಿನ ಕ್ಷೌರದ ಅಂಗಡಿ ಕಡೆ ನಡೆದ. ಆದರೆ ಅಲ್ಲಿನ ಕ್ಷೌರಿಕ ಹೇಳಿದ, “ಇವತ್ತು, ನನಗೆ ಇಷ್ಟೊಂದು ಉದ್ದದ ಕೂದಲು ಕತ್ತರಿಸಲು ಪುರುಸೊತ್ತಿಲ್ಲ.” ಬೇಜಾರುಪಟ್ಟ ಶೃಂಗೇರಿ ಶ್ರೀನಿವಾಸ ತನ್ನ ಪತ್ನಿಯಿಂದ ನೆರವು ಕೇಳಲೆಂದು ಮನೆಗೆ ಹಿಂತಿರುಗಿದ. ಆದರೆ, ಆತನ ಪತ್ನಿ ಹೇಳಿದಳು, “ಇವತ್ತು, ನನಗೆ ಇಷ್ಟೊಂದು ಉದ್ದದ ಕೂದಲು ಕತ್ತರಿಸಲು ಪುರುಸೊತ್ತಿಲ್ಲ.” ಸ್ವಲ್ಪ ಕೋಪಗೊಂಡ ಶೃಂಗೇರಿ ಶ್ರೀನಿವಾಸ ತನ್ನ ಸ್ನೇಹಿತನಾದ ದರ್ಜಿಯ ಅಂಗಡಿಗೆ…