My Best Friend – Kannada

ನನ್ನ ಮೆಚ್ಚಿನ ಗೆಳತಿ



ನನಗೆ ಒಬ್ಬಳು ಗೆಳತಿ ಇದ್ದಾಳೆ. ಅವಳು ನನ್ನ ಮನೆಯಲ್ಲೇ ಇರುತ್ತಾಳೆ.



ನಾನು ಖುಷಿಯಾಗಿದ್ದಾಗ, ಅವಳೂ ಖುಷಿಯಾಗಿರುತ್ತಾಳೆ.



ನಾನು ಅತ್ತರೆ, ಅವಳು ಜೊತೆಯಲ್ಲಿ ಅಳುತ್ತಾಳೆ.



ಆದರೆ ನನಗೆ ಅವಳ ಧ್ವನಿ ಕೇಳಿಸುವುದಿಲ್ಲ. ನನ್ನ ಗೆಳತಿ ಕನ್ನಡಿಯ ಒಳಗೆ ಅವಿತಿದ್ದಾಳೆ.



“ಹೊರಗೆ ಬಾ, ಆಟ ಆಡೋಣ” ಎಂದು ನಾನು ಹೇಳುತ್ತೇನೆ. ಅವಳು ಹೊರಗೆ ಬರುವುದಿಲ್ಲ.



ನನಗೆ ದುಃಖವಾಗುತ್ತದೆ.  ನಾನು ಮಲಗಲು ಹೋಗುತ್ತೇನೆ.



ನನ್ನ ನಿದ್ದೆಯಲ್ಲಿ, ಅವಳು ಕನ್ನಡಿಯಿಂದ ಹೊರಗೆ ಬರುತ್ತಾಳೆ. ಆಗ ನಾವು ಬಹಳ ಮೋಜು ಮಾಡುತ್ತೇವೆ.



ನಾವು ಆಟ ಆಡುತ್ತೇವೆ,  ನಾವು  ಓಡುತ್ತೇವೆ,  ನಾವು ಒಟ್ಟಿಗೆ ಕೂಗುತ್ತೇವೆ, ಕಿರುಚುತ್ತೇವೆ.



ನಾನು ಅವಳ ಜೊತೆ ಮಾತಾಡಿದರೆ, ಅವಳು ನನ್ನ ಜೊತೆ ಮಾತಾಡುತ್ತಾಳೆ.



ಬೆಳಗಿನ ಹೊತ್ತು, ನನ್ನ ಗೆಳತಿ ಮತ್ತೆ ಕನ್ನಡಿಯ ಒಳಗೆ ಅವಿತುಬಿಡುತ್ತಾಳೆ.



ಈಗ ನನಗೆ ಬೇಸರ ಆಗುವುದಿಲ್ಲ. ನಾವು ಕನಸಿನಲ್ಲಿ ಮತ್ತೆ ಆಟ ಆಡುತ್ತೇವೆ ಎಂದು ನನಗೆ ಗೊತ್ತು.




Click to Read an Interactive version of this story here