LISTEN TO MY BODY – Kannada





 ನಾನು ಇವತ್ತು ಶಾಲೆಗೆ ಹೋಗಲ್ಲ. ನಮಗೆ ಇಂದು ರಜೆ.



ನಾನು ಇವತ್ತು ಟಿ.ವಿ. ನೋಡುತ್ತಾ ಕೂರುವುದಿಲ್ಲ. ಹೇಗಿದ್ರೂ, ಕರೆಂಟ್ ಅಂತೂ ಇಲ್ಲ.



ಹಾಗಾದರೆ, ನಾನಿವತ್ತು ಏನು ಮಾಡ್ಲಿ? ಇವತ್ತು ನಾನು ನನ್ನ ದೇಹವನ್ನು ಆಲಿಸಲಿದ್ದೇನೆ.

ನೀವು ನಿಮ್ಮ ದೇಹವನ್ನು ಆಲಿಸಬಲ್ಲಿರಾ?



 ಮೊದಲು ನಾನು ಶಬ್ದ ಮಾದದೇ ಇರಬೇಕು. ಹಾಗಿದ್ದರೆ ಮಾತ್ರ ನಾನು ನನ್ನ ದೇಹಕ್ಕೆ ಕಿವಿಗೊಡಬಹುದು. ಪೂರ್ತಿ ನಿಶ್ಯಬ್ದ.



ಹೌದು, ಈಗ ನಾನು ನನ್ನ ಶ್ವಾಸವನ್ನು ಆಲಿಸಬಹುದು. ಒಳಗೆ… ಹೊರಗೆ…  ಒಳಗೆ… ಹೊರಗೆ…



ಹಾಗೆಯೇ, ನನ್ನ ಉಸಿರಾಟದ ಶಬ್ದ ಹೆಚ್ಚಿಸಬಹುದು…. ಶ್ ಶ್ ಶ್ ಶ್ ಶ್ ಶ್ ಶ್ ಶ್ ಶ್! ಹಾಗೂ ಮೆತ್ತಗೆ ಮುಂ… ಮುಂ… ಮುಂ…



ಹಾಗೂ ಈಗ ನಾನು ನನ್ನ ಹೃದಯ ಬಡಿತವನ್ನು ಕೇಳಬಹುದು…. ಡೂಡೊಂ, ಡೂಡೊಂ, ಡೂಡೊಂ…



ನಾನು ನನ್ನ ಹೃದಯವನ್ನು ವೇಗವಾಗಿ ಬಡಿಸಬಲ್ಲೇನೆ ಅಥವಾ ಜೋರಾಗಿಸಬಹುದೇ? ಹೌದು, ಜಂಪ್ ಮಾಡಿದರಾಯ್ತು, ಮೇಲೆ ಮತ್ತು ಕೆಳಗೆ ಇಪ್ಪತ್ತು ಬಾರಿ.



ಈಗ ನೋಡಿ, ನನ್ನ ಎದೆ ಜೋರಾಗಿ ಬಡೀತಿದೆ. ಡೂಡೊಂ, ಡೂಡೊಂ, ಡೂಡೊಂ, ಡೂಡೊಂ, ಡೂಡೊಂ, ಡೂಡೊಂ!



ಮತ್ತು, ನನ್ನ ಬೆರಳನ್ನು ಕೈ ನಾಡಿಯಲ್ಲಿಟ್ಟರೆ ಆಗಲೂ ನನಗೆ ಬಡಿತ ಕೇಳಿಸುತ್ತದೆ. ಬೆರಳುಗಳಿಗೆ ಶಬ್ದ ಕೇಳಿಸುತ್ತದೆಯೇ?



ಅಷ್ಟೇ ಅಲ್ಲ, ನನ್ನ ನಗುವನ್ನು ನಾನು ಕೇಳಬಲ್ಲೆ.  ಹಹ್ಹಾ….ಹಹ್ಹಾಹ್ಹಾ…ಹಾಹಾಹಾ!



ಮತ್ತು ಅಳುವುದನ್ನು.  ಬೂಹೂ… ಬೂಹೂ…



ಟಪ್…. ಟಪಾ…. ಟಪ್… ಟಪಾ… ಟಪ್!



ಎಲ್ಲದಕ್ಕಿಂತಲೂ ಹೆಚ್ಚಾಗಿ ನಾನು ಇದನ್ನು ಆಲಿಸಬಲ್ಲೆ, ಅದು ಹೊಟ್ಟೆಯ ಸಪ್ಪಳ! ಗುಡು, ಗುಡು, ಗುಡು, ಗುಡು, ಗುಡು….



ಅದೇನಂತಿದೆ…. ತಿನ್ನೋಕೆ ಕೊಡು…. ತಿನ್ನೋಕೆ ಕೊಡು….



ಆಹಾ ನನ್ನ ಮೂಗಿಗೆ ಜಿಲೇಬಿ ಕರಿಯುವ ಸದ್ದು ಕೇಳುತ್ತಿದೆ, ಅಮ್ಮನ ಅಡುಗೆಮನೆಯಿಂದ. ಮೂಗಿಗೆ ಶಬ್ದ ಕೇಳುತ್ತದೆಯೇನು?



ಇದು ಒಂದು ಗಮ್ಮತ್ತು, ದೇಹದ ಶಬ್ದಕ್ಕೆ ಕಿವಿಕೊಡುವುದು. ಮತ್ತು ಈಗ ನಾನು ನನ್ನ ದವಡೆ ಜಗಿಯುವುದನ್ನು ಆಲಿಸಬೇಕು.



ಹಾಗೂ ಕೇಳಬೇಕು ನನ್ನ ಹೊಟ್ಟೆ, ಅಮ್ಮ ಮಾಡಿದ ಬಿಸಿ ಜಿಲೇಬಿಯನ್ನು ಸವಿಯುತ್ತ ಕರಗಿಸುವುದು.




Click to Read an Interactive version of this story here